The only platform for Personal and Business needs
Join Free

News

World

 (videos)

India

 (regional)
Hindi
Telugu
Tamil
Kannada
Malayalam

News
 • ನಾನೇನು ಒಳ್ಳೆ ಕೆಲ್ಸ ಮಾಡಿಲ್ಲ : ಸಿಬಿಐ ಚೀಫ್ ಸಿನ್ಹಾ Tue, 02 Dec 2014 13:51:07 +0530
  ನವದೆಹಲಿ, ಡಿ.2: "ನಾನೇನು ಒಳ್ಳೆ ಕೆಲಸ ಮಾಡಿಲ್ಲ, ನಿವೃತ್ತಿ ಬಗ್ಗೆ ನಾನೇನು ಹೇಳಲಾರೆ, ನಿಮಗೆ ಬೇಕಾದ್ದು ಬರೆದುಕೊಳ್ಳಿ" ಎಂದು ಸಿಬಿಐ ನಿರ್ದೇಶಕ ರಂಜಿತ್ ಸಿನ್ಹಾ ಅವರು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ. ಸಿನ್ಹಾ ಅವರ ನಿರ್ದೇಶಕ ಸ್ಥಾನದ ಅವಧಿ ಮಂಗಳವಾರಕ್ಕೆ ಅಂತ್ಯಗೊಳ್ಳಲಿದೆ. ತಮ್ಮ ಅಧಿಕಾರ ಅವಧಿಯಲ್ಲಿ ಸದಾ ಒಂದಿಲ್ಲೊಂದು ವಿವಾದಗಳಿಗೆ ಈಡಾಗಿ ಮುಜುಗರಕ್ಕೆ ಒಳಗಾಗಿದ್ದ ಸಿಬಿಐ ನಿರ್ದೇಶಕ ರಂಜಿತ್‌ಸಿನ್ಹಾ

 • ಚುನಾವಣಾ ದುಂದು ವೆಚ್ಚ, ಸಂಸದ ಮೊಯ್ಲಿಗೆ ನೋಟಿಸ್ Tue, 02 Dec 2014 13:13:51 +0530
  ಬೆಂಗಳೂರು, ಡಿ.2: ಲೋಕಸಭಾ ಚುನಾವಣೆ ವೇಳೆ ಆಯೋಗ ನಿಗದಿಪಡಿಸಿದ ಮೊತ್ತಕ್ಕಿಂತ ಅಧಿಕ ಹಣ ಬಳಕೆ ಮಾಡಿ ಜಯಭೇರಿ ಬಾರಿಸಿದ ಆರೋಪ ಹೊತ್ತಿರುವ ಚಿಕ್ಕಬಳ್ಳಾಪುರದ ಸಂಸದ ಎಂ.ವೀರಪ್ಪ ಮೊಯ್ಲಿ ಅವರಿಗೆ ಹೈಕೋರ್ಟಿನಿಂದ ನೋಟಿಸ್ ಜಾರಿ ಮಾಡಲಾಗಿದೆ. ಚುನಾವಣಾ ಆಯೋಗ ನಿಗದಿ ಮಾಡಿದ್ದಕ್ಕಿಂತ ಹೆಚ್ಚು ಹಣ ವೆಚ್ಚ ಮಾಡಿದ್ದಲ್ಲದೆ, ಖರ್ಚು ವೆಚ್ಚದ ಅಂಕಿ ಅಂಶಗಳ ಮಾಹಿತಿ ನೀಡದ ಮೊಯ್ಲಿ

 • ಕೊಡಿ ಹಬ್ಬಕ್ಕೆ ಕೋಟೇಶ್ವರದಲ್ಲಿ ಕಾರ್ಟೂನು ಸವಿಯಿರಿ Tue, 02 Dec 2014 12:55:23 +0530
  ಕುಂದಾಪುರ, ಡಿ. 2: ತಾಲೂಕಿನಲ್ಲಿ ಆಯೋಜಿಸಿದ್ದ 'ಕುಂದಾಪ್ರ ಕಾರ್ಟೂನು ಹಬ್ಬ'ಕ್ಕೆ ಉತ್ತಮ ಸ್ಪಂದನೆ ಹಾಗೂ ಪ್ರತಿಕ್ರಿಯೆ ಬಂದಿತ್ತು. ಇದರಿಂದ ಉತ್ತೇಜನಗೊಂಡಿರುವ ಸಂಘಟಕರು ಮತ್ತೆ ಕಾರ್ಟೂನು ಹಬ್ಬವನ್ನು ಆಯೋಜಿಸಿದ್ದಾರೆ. ಕೊಡಿಹಬ್ಬದ ಸಂದರ್ಭ ಡಿ. 6 ಮತ್ತು 7ರಂದು ಕಾರ್ಟೂನು ಹಬ್ಬ ಆಯೋಜಿಸಲಾಗಿದೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟೇಶ್ವರದ ವಿಶ್ವಕರ್ಮ ಕಲ್ಯಾಣ ಮಂಟಪದಲ್ಲಿ 'ಕೊಡಿ ಹಬ್ಬಕ್ಕೆ ನಗೆಯ

 • ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಚಂದನದಲ್ಲಿ ಪಾಠ Tue, 02 Dec 2014 12:47:50 +0530
  ಬೆಂಗಳೂರು, ಡಿ.2 : ಎಸ್‌ಎಸ್‌ಎಲ್‌ಸಿ ಹಾಗೂ ಸಿಬಿಎಸ್‌ಸಿ ತರಗತಿಗಳ ಗಣಿತ ಹಾಗೂ ವಿಜ್ಞಾನ ವಿಷಯಗಳನ್ನು ಡಿ.2ರಿಂದ ದೂರದರ್ಶನದ ಚಂದನ ವಾಹಿನಿಯಲ್ಲಿ ಬೋಧನೆ ಮಾಡಲಾಗುತ್ತದೆ. ಮಂಗಳವಾರದಿಂದ ಶುಕ್ರವಾರದ ತನಕ ರಾತ್ರಿ 7 ರಿಂದ 8 ಗಂಟೆಯ ತನಕ ಈ ಕಾರ್ಯಕ್ರಮ ಪ್ರಸಾರವಾಗಲಿದೆ. ಚಿಪ್ಸ್ ಐಐಟಿ ಸಂಸ್ಥೆಯ ಶೋಭ ವಿ.ರಾಮಯ್ಯ ಅವರು ಈ ಕುರಿತು ಮಾಹಿತಿ ನೀಡಿದ್ದು, ಎಸ್‌ಎಸ್‌ಎಲ್‌ಸಿ

 • ಕೆಪಿಸಿಎಲ್‌ನಲ್ಲಿ 359 ಹುದ್ದೆಗಳು ಖಾಲಿ ಇವೆ Tue, 02 Dec 2014 12:04:59 +0530
  ಬೆಂಗಳೂರು, ಡಿ.2 : ಕರ್ನಾಟಕ ವಿದ್ಯುತ್ ನಿಗಮ ನಿಯಮಿತವು ಅರ್ಹ ಅಭ್ಯರ್ಥಿಗಳಿಂದ ಹೈದರಾಬಾದ್-ಕರ್ನಾಟಕ, ಇತರ ಪ್ರದೇಶಗಳ ಅಭ್ಯರ್ಥಿಗಳಿಂದ 359 ಹುದ್ದೆಗಳ ಭರ್ತಿಯಾಗಿ ಅರ್ಜಿಯನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 22. ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ಅಂಚೆ, ಖುದ್ದಾಗಿ ಅಥವ ಕೋರಿಯರ್ ಮೂಲಕ ಅರ್ಜಿಯನ್ನು ಸಲ್ಲಿಸಿದರೆ ಅದನ್ನು ಪರಿಗಣಿಸಲಾಗುವುದಿಲ್ಲ ಎಂದು

 • ದೆಹಲಿ ಚರ್ಚ್ ಗೆ ಬೆಂಕಿ, ಕ್ರೈಸ್ತರಿಂದ ಪ್ರತಿಭಟನೆ Tue, 02 Dec 2014 11:12:08 +0530
  ಬೆಂಗಳೂರು, ಡಿ.2: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.14.05: ಪೂರ್ವ ದೆಹಲಿಯಲ್ಲಿನ ಸಂತ

 • ಪ್ರಜ್ವಲ್ ರೇವಣ್ಣ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಖಾತೆ Tue, 02 Dec 2014 10:52:33 +0530
  ಬೆಂಗಳೂರು, ಡಿ.2 : ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ ಪುತ್ರ, ಪತ್ನಿಯ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು, ಅದನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಎಂಟು ತಿಂಗಳ ಹಿಂದೆ ಆರಂಭಗೊಂಡಿದ್ದ ಖಾತೆ ಬಗ್ಗೆ ಪೊಲೀಸರಿಗೆ ದೂರು ನೀಡಲು ಪ್ರಜ್ವಲ್ ನಿರ್ಧರಿಸಿದ್ದಾರೆ. ಎಚ್.ಡಿ.ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಮತ್ತು ಅವರ ತಾಯಿ ಭವಾನಿ ರೇವಣ್ಣ

 • ಮೈಸೂರಿನಲ್ಲಿ ಕಾವೇರಿ ನದಿಗೊಂದು ಗ್ಯಾಲರಿ Tue, 02 Dec 2014 09:36:49 +0530
  ಬೆಂಗಳೂರು, ಡಿ.2 : ಗಂಗಾನದಿ ಮತ್ತು ಅಸ್ಸಾಂನ ಬ್ರಹ್ಮಪುತ್ರಾ ನದಿ ಗ್ಯಾಲರಿ ಮಾದರಿಯಲ್ಲಿ ಕರ್ನಾಟಕ ಜೀವನದಿ ಕಾವೇರಿಯ ಗ್ಯಾಲರಿ ಮೈಸೂರಿನಲ್ಲಿ ನಿರ್ಮಾಣಗೊಳ್ಳಲಿದೆ. ಮೈಸೂರು ವಿಶ್ವವಿದ್ಯಾಲಯದ ಆವರಣದಲ್ಲಿ ಗ್ಯಾಲರಿ ನಿರ್ಮಾಣಗೊಳ್ಳಲಿದ್ದು, ಸ್ಥಳ ನೀಡಲು ವಿಶ್ವವಿದ್ಯಾಲಯ ಒಪ್ಪಿಗೆಯನ್ನು ನೀಡಿದೆ. ಬೆಂಗಳೂರಿನಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಪ್ರವಾಸೋದ್ಯಮ ಸಚಿವ ಆರ್.ವಿ.ದೇಶಪಾಂಡೆ ಅವರು ಈ ಕುರಿತು ಮಾಹಿತಿ ನೀಡಿದ್ದು, ಮುಂದಿನ 9

 • ಕರ್ನಾಟಕ : ಮಂಗಳವಾರದ ತುಣುಕು ಸುದ್ದಿಗಳು Tue, 02 Dec 2014 09:06:28 +0530
  ಬೆಂಗಳೂರು, ಡಿ. 2: ಕರ್ನಾಟಕದಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ರಾಜ್ಯದ ಒಟ್ಟಾರೆ ಸುದ್ದಿಗಳ ಸಂಗ್ರಹ ನಿಮಗೆ ನೀಡುವ ಪ್ರಯತ್ನ ಇದಾಗಿದೆ. ಸಮಯ 2 ಗಂಟೆ :

 • ಸ್ವಚ್ಛ ಭಾರತ ಅಭಿಯಾನಕ್ಕೆ 'ಡನ್' ಎಂದ ಮಂಡ್ಯ Mon, 01 Dec 2014 19:50:09 +0530
  ಮಂಡ್ಯ, ಡಿ. 1: ಸ್ವಚ್ಛ ಭಾರತ ಅಭಿಯಾನ ಅಸಂಖ್ಯಾತ ವೈಟ್ ಕಾಲರ್ ಜನರ ಕೈಯಲ್ಲಿ ಪೊರಕೆ ಹಿಡಿಸಿದೆ. ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸುವುದನ್ನು ಹೆಮ್ಮೆಯ ವಿಷಯವನ್ನಾಗಿಸಿದ ಹೆಗ್ಗಳಿಕೆ ಈ ಅಭಿಯಾನದ್ದು. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದಿಂದ ಹೆಚ್ಚು ಸ್ಪಂದನೆ ಸಿಕ್ಕಿರಲಿಲ್ಲ. ಆದರೆ, ಸರ್ಕಾರಿ ಅಧಿಕಾರಿಗಳು ಎಂಬ ಆಡಳಿತ ಯಂತ್ರ ಮಾತ್ರ ನಿರ್ಲಿಪ್ತವಾಗಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯ

 • ಗೂಸಾ ನೀಡಿದ ರೋಹ್ಟಕ್ ಸಿಸ್ಟರ್ಸ್ ಗೆ ಸನ್ಮಾನ Mon, 01 Dec 2014 18:39:02 +0530
  ಹರ್ಯಾಣ, ಡಿ. 1 : ಕಾಮುಕರಿಗೆ ಬಸ್ ನಲ್ಲಿ ಸರಿಯಾಗಿ ಗೂಸಾ ನೀಡಿದ ಸಹೋದರಿಯರನ್ನು ಸನ್ಮಾನಿಸಲು ಹರ್ಯಾಣ ಸರ್ಕಾರ ತೀರ್ಮಾನಿಸಿದೆ. ಗಣರಾಜ್ಯೋತ್ಸವದ ವೇಳೆ ರೋಹ್ಟಕ್ ಸಹೋದರಿಯರನ್ನು ಗೌರವಿಸಲಾಗುವುದು ಎಂದು ತಿಳಿಸಿದೆ. ಕಿರುಕುಳ ನೀಡಲು ಶುರುವಿಟ್ಟುಕೊಂಡ ಮೂವರು ಯುವಕರ ವಿರುದ್ಧ ಹೋರಾಡಿದ ಯುವತಿಯರ ಧೈರ್ಯ ಮೆಚ್ಚಲೇ ಬೇಕು. ಬಸ್ ನಲ್ಲಿಯೇ ಯುವಕರಿಗೆ ಸರಿಯಾದ ಏಟು ನೀಡಿ

 • ಶಾಲೆಯಲ್ಲಿ ಸುರಕ್ಷೆ: ಗಡುವು ಮುಗಿದರೂ ಮಾಹಿತಿ ಸಿಕ್ಕಿಲ್ಲ Mon, 01 Dec 2014 18:30:23 +0530
  ಬೆಂಗಳೂರು, ಡಿ. 1: ರಾಜ್ಯಾದ್ಯಂತ ಶಾಲೆಗಳಲ್ಲಿ ಮಕ್ಕಳ ಮೇಲೆ ನಡೆದ ದೌರ್ಜನ್ಯ ಪ್ರಕರಣಗಳು ಸಾರ್ವಜನಿಕ ವಲಯದಲ್ಲಿ ತೀವ್ರ ಸಂಚಲನ ಉಂಟುಮಾಡಿತ್ತು. ಆದರೆ, ಸರ್ಕಾರ ನೀಡಿದ್ದ ಗಡುವು ಶನಿವಾರವೇ ಅಂತ್ಯವಾಗಿದ್ದರೂ ಶಾಲೆಗಳಲ್ಲಿ ಕೈಗೊಳ್ಳಲು ಸೂಚಿಸಿದ್ದ ಸುರಕ್ಷತಾ ಕ್ರಮಗಳ ಜಾರಿ ಮಾತ್ರ ಆಮೆ ವೇಗದಲ್ಲಿ ಸಾಗಿದೆ. [ಬಾಲಕಿ ಮೇಲೆ ಶಿಕ್ಷಕನಿಂದ ಲೈಂಗಿಕ ದೌರ್ಜನ್ಯ] ಸರ್ಕಾರ ಸೂಚಿಸಿದಂತೆ ಸುರಕ್ಷತಾ ಕ್ರಮಗಳನ್ನು

 • ದೇಶದ ದಕ್ಷಿಣದ ಜನರಲ್ಲೇ ಏಡ್ಸ್ ಸೋಂಕು ಅಧಿಕ Mon, 01 Dec 2014 18:22:09 +0530
  ಬೆಂಗಳೂರು, ಡಿ.1: ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಎಚ್ಐವಿ ಸೋಂಕುಪೀಡಿತರ ಅಂಕಿ ಅಂಶ ಪ್ರಕಟಿಸಲಾಗಿದೆ. ದೇಶದ ಅರ್ಧಕ್ಕೂ ಅಧಿಕ ಸೋಂಕು ಪೀಡಿತರು ದಕ್ಷಿಣ ಭಾಗದಲ್ಲೇ ಇದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ. ದಕ್ಷಿಣ ಭಾರತದ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಶೇ.50ರಷ್ಟು ಎಚ್‌ಐವಿ ಪ್ರಕರಣ ಪತ್ತೆಯಾಗಿವೆ. 2014 ಮೇ ತಿಂಗಳಿನಲ್ಲಿ

 • ಸಬ್ಸಿಡಿ ರಹಿತ ಎಲ್ ಪಿಜಿ ಸಿಲಿಂಡರ್ ಬೆಲೆ ಇಳಿಕೆ Mon, 01 Dec 2014 15:56:48 +0530
  ನವದೆಹಲಿ, ಡಿ.1: ಸಬ್ಸಿಡಿ ಸಹಿತ ಸಿಲಿಂಡರ್ ಬೆಲೆ ಏರಿಕೆ ಮಾಡಿದ್ದ ನರೇಂದ್ರ ಮೋದಿ ಸರ್ಕಾರ ಸಬ್ಸಿಡಿಯೇತರ ಎಲ್ಪಿಜಿ ಸಿಲಿಂಡರಿನ ಬೆಲೆಯನ್ನು ಇಳಿಕೆ ಮಾಡಿ ಆದೇಶ ಹೊರಡಿಸಿದೆ. ನೂತನ ದರಪಟ್ಟಿಯಂತೆ ಪ್ರತಿ ಸಿಲಿಂಡರ್ ಮೇಲೆ 113 ರು ಇಳಿಕೆಯಾಗಲಿದೆ. ಜೊತೆಗೆ ಜೆಟ್ ಅನಿಲ ದರ ಶೇ 4.1ರಷ್ಟು ಇಳಿಕೆಯಾಗಿದೆ. ವಾರ್ಷಿಕ 12 ಸಿಲಿಂಡರುಗಳನ್ನು ಬಳಸುವ ಪ್ರತಿ 14.2

 • ಮಂಗಳವಾರ ಇಬ್ಬರು ನಕ್ಸಲರ ಶರಣಾಗತಿ Mon, 01 Dec 2014 15:22:40 +0530
  ಬೆಂಗಳೂರು, ಡಿ.1 : ಕರ್ನಾಟಕದ ಇಬ್ಬರು ನಕ್ಸಲ್ ನಾಯಕರು ಸಮಾಜದ ಮುಖ್ಯವಾಹಿನಿಗೆ ಬರಲು ಒಪ್ಪಿಗೆ ನೀಡಿದ್ದು, ಇಬ್ಬರು ಮಂಗಳವಾರ ಶರಣಾಗಲಿದ್ದಾರೆ. ನೂರ್‌ ಜುಲ್ಫೀಕರ್‌ ಮತ್ತು ಸಿರಿಮನೆ ನಾಗರಾಜ್‌ ಪೊಲೀಸರಿಗೆ ಶರಣಾಗಲಿರುವ ನಕ್ಸಲರಾಗಿದ್ದಾರೆ. ಶಾಂತಿಗಾಗಿ ನಾಗರಿಕ ವೇದಿಕೆಯ ಸದಸ್ಯೆ ಗೌರಿ ಲಂಕೇಶ್ ಅವರು ಈ ಕುರಿತು ಮಾಹಿತಿ ನೀಡಿದ್ದು, ಡಿ.2ರ ಮಂಗಳವಾರ ನೂರ್‌ ಜುಲ್ಫೀಕರ್‌ ಮತ್ತು


Movies
 • ನಾಸ್ತಿಕ ಕಮಲ್ ಹಾಸನ್, ತ್ರಿನಾಮ ಮಠದಲ್ಲಿ ಪ್ರತ್ಯಕ್ಷ Mon, 01 Sep 2014 16:57:06 +0530
  ನಟ ಕಮಲ್ ಹಾಸನ್ ಅವರ ಧಾರ್ಮಿಕ ನಂಬಿಕೆ ಎಂದಿಗೂ ಚರ್ಚಾಸ್ಪದ ವಿಷಯವಾಗಿ ಉಳಿದಿದೆ. ಪಾಲಕ್ಕಾಡ್ ನ ಹಿಂದೂ ಸಂಪ್ರದಾಯ ವೈದಿಕ ಕುಟುಂಬದಲ್ಲಿ ಜನಿಸಿದ ಕಮಲ್ ಹಾಸನ್ ತಮ್ಮ ನಡೆ ನುಡಿಗಳಲ್ಲಿ ಯಾವ ಧರ್ಮ, ಮತ, ಪಂಥಗಳನ್ನು ಮೆಚ್ಚಿಸುವ ಕಾರ್ಯಕ್ಕೆ ಇಳಿದ ಉದಾಹರಣೆಗಳಿಲ್ಲ. ಆದರೆ, ಭಾನುವಾರ ತಿರುನಲ್ವೇಲಿಯ ತ್ರಿನಾಮ ಧಾರಣೆ ಮಠವೊಂದರಲ್ಲಿ ಕಮಲ್ ಸಾಂಪ್ರದಾಯಿಕ ಉಡುಗೆ ತೊಟ್ಟು

 • ಪುನೀತ್ ಅಭಿನಯದ ಪವರ್ ಸ್ಟಾರ್ : ಓದುಗರ ವಿಮರ್ಶೆ Mon, 01 Sep 2014 14:35:47 +0530
  {rating}ಪವರ್ ಸ್ಟಾರ್ ಚಿತ್ರ ನೋಡಿ ಚಿತ್ರಮಂದಿರದಿಂದ ಹೊರಬರುತ್ತಿದ್ದ ಸುಮಾರು ಎಂಬತ್ತರ ಹರೆಯದ ಪವರ್ ಫುಲ್ ಅಜ್ಜಿ ಹೇಳಿದ್ದು, ' ನಮ್ ಕಾಲದಲ್ಲಿ ಅವ್ರಪ್ಪನ ಚಿತ್ರವನ್ನು ನೋಡ್ತಾ ಇದ್ವಿ, ಈಗ ಮಕ್ಳ ಒತ್ತಾಯದ ಮೇರೆಗೆ ಈ ಚಿತ್ರ ನೋಡೋಕೆ ಬಂದೆ, ಇವ್ನಿಗೂ ನಟನೆಯಲ್ಲಿ ರಾಜಕುಮಾರ್ ಗಿರುವಷ್ಟೇ ಹಿಡಿತವಿದೆ' ರಿಮೇಕ್ ಚಿತ್ರವೊಂದು ತೆರೆಗೆ ಬಂದಾಗ ಅದನ್ನು ಮೂಲ ಚಿತ್ರಕ್ಕೆ

 • ವೇಶ್ಯಾಗೃಹದಲ್ಲಿದ್ದ ನಟಿ ಶ್ವೇತಾ ಬಸು ಬಂಧನ Mon, 01 Sep 2014 13:56:53 +0530
  ಟಾಲಿವುಡ್ ನ ಉದಯೋನ್ಮುಖ ನಟಿ ಶ್ವೇತಾ ಬಸು ಪ್ರಸಾದ್ ಬಂಧನವಾಗಿದೆ. ಹೈದರಾಬಾದಿನ ಬಂಜಾರ ಹಿಲ್ಸ್ ನ ಸ್ಟಾರ್ ಹೋಟೆಲ್ ವೊಂದರಲ್ಲಿ ನಡೆಸಲಾಗುತ್ತಿದ್ದ ವೇಶ್ಯಾವಾಟಿಕೆ ದಂಧೆಯಲ್ಲಿ ಶ್ವೇತಾ ಬಸು ಕೂಡಾ ಇದ್ದರು ಅವರನ್ನು ವಶಪಡಿಸಿಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ. ಉದ್ಯಮಿಯೊಬ್ಬರ ಜೊತೆ ನಟಿ ಶ್ವೇತಾ ಬಸು ಪ್ರಸಾದ್ ಕಂಡು ಬಂದಿದ್ದು, ಶ್ವೇತಾ ಅವರು

 • ತಂದೆ ಸಾವಿಗೆ ಪರೋಕ್ಷ ಕಾರಣನಾದೆ: ಟಿಎನ್ ಸೀತಾರಾಮ್ Mon, 01 Sep 2014 13:41:21 +0530
  ಕನ್ನಡ ಸಣ್ಣ ಪರದೆಯಲ್ಲಿ ಲಾಯರ್ ಎಂದೇ ಹೆಸರಾಗಿರುವ ಟಿ ಎನ್ ಸೀತಾರಾಮ್, ರಮೇಶ್ ಅರವಿಂದ್ ಅರ್ಪಿಸುವ ' ವೀಕೆಂಡ್ ವಿತ್ ರಮೇಶ್' ಶೋನ ಭಾನುವಾರದ ಎಪಿಸೋಡ್ ನಲ್ಲಿ (ಆ 31) ಅತಿಥಿಯಾಗಿ ಬಂದಿದ್ದರು. ಎಂದಿನಂತೆ ಅಚ್ಚುಕಟ್ಟಾಗಿ ಮೂಡಿಬಂದ ಕಾರ್ಯಕ್ರಮದಲ್ಲಿ ಸೀತಾರಾಮ್ ತನ್ನ ಬಾಲ್ಯ ಜೀವನದಿಂದ ಸೆಲೆಬ್ರಿಟಿ ಜೀವನದವರೆಗಿನ ಕಥೆಯನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು.

 • ಹಾಲಿವುಡ್ ನಟಿಯರ ನಗ್ನ ಚಿತ್ರಗಳು ಲೀಕ್ Mon, 01 Sep 2014 13:37:55 +0530
  ಆಸ್ಕರ್ ವಿಜೇತ ಯುವನಟಿ ಜೆನ್ನಿಫರ್ ಲಾರೆನ್ಸ್ ಸೇರಿದಂತೆ ಹಲವಾರು ಹಾಲಿವುಡ್ ಬೆಡಗಿಯರ ನಗ್ನ ಚಿತ್ರಗಳು ಇಂಟರ್ನೆಟ್ ಜಾಲದಲ್ಲಿ ತೇಲಿ ಮುಳುಗಿ ಹರಿದಾಡುತ್ತಿವೆ. ಈ ನಟಿಯರ ಮೊಬೈಲ್, ಖಾಸಗಿ ವಿವರಗಳಿಗೆ ಕನ್ನ ಹಾಕಿದ ಚೋರನೊಬ್ಬ ಸರಣಿ ಸೆಕ್ಸಿ ಚಿತ್ರಗಳ ಮಾಲೆಯನ್ನು ಟ್ವಿಟ್ಟರ್ ನಲ್ಲಿ ಹರಿಸಿದ್ದಾನೆ. ಜೆನ್ನಿಫರ್ ಲಾರೆನ್ಸ್ ಜೊತೆಗೆ ಆರಿಯಾನಾ ಗ್ರಾಂಡೆ, ಕೇಟ್ ಆಪ್ಟನ್, ಕ್ರಿಸ್ಟನ್ ಡಂಸ್ಟ್,

 • ತಮಿಳು 'ಲೂಸಿಯಾ' ಚಿತ್ರಕ್ಕೆ ಕಮಲ್ ಚಿತ್ರ ಶೀರ್ಷಿಕೆ Mon, 01 Sep 2014 12:28:36 +0530
  ಪವನ್ ಕುಮಾರ್ ನಿರ್ದೇಶನದ ನೀನಾಸಂ ಸತೀಶ್, ಶ್ರುತಿ ಹರಿಹರನ್ ನಟನೆಯ ಲೂಸಿಯಾ ಚಿತ್ರ ತಮಿಳಿನಲ್ಲಿ ರಿಮೇಕ್ ಆಗುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಈಗ ಈ ಚಿತ್ರಕ್ಕೆ ಕಮಲ್ ಹಾಸನ್ ಅವರ ಹಳೆ ಚಿತ್ರದ ಹೆಸರನ್ನೇ ಆಯ್ಕೆ ಮಾಡಲಾಗಿದೆ. ತನ್ನ ಚಿತ್ರಕ್ಕೆ ಕಮಲ್ ಅವರ ಹೆಸರು ಸಿಕ್ಕಿರುವುದಕ್ಕೆ ನಾಯಕ ನಟ ಸಿದ್ದಾರ್ಥ್ ಸೂರ್ಯನಾರಾಯಣ್ ಸಕತ್ ಖುಷಿಯಲ್ಲಿದ್ದಾರೆ. ಈಗಿನ್ನೂ

 • ಕಾಮುಕರ ವಿರುದ್ಧ ನಟ 'ಮೈನಾ' ಚೇತನ್ ಕಿಡಿ Sat, 30 Aug 2014 13:57:36 +0530
  ಬೆಳ್ಳಿ ಪರದೆಯ ಮೇಲೆ ಕಾಣಿಸಿಕೊಳ್ಳಬೇಕಿದ್ದರೆ ನಟಿಯರು ಸೆರಗು ಹಾಸಬೇಕಾದಂಥ ಹೀನ ಸಂಸ್ಕೃತಿಯ ವಿರುದ್ಧ ಕನ್ನಡ ಚಿತ್ರರಂಗದ ಘಟಾನುಘಟಿಗಳೇ ಜಾಣಕಿವುಡ, ಜಾಣಕುರುಡರಂತೆ ಕುಳಿತಿರುವಾಗ, ಕೆಲವೇ ಕೆಲವು ಚಿತ್ರಗಳಲ್ಲಿ ನಟಿಸಿದ್ದರೂ ದೃಢ ಅಭಿಪ್ರಾಯ ಮಂಡಿಸಲು ಹಿಂದೇಟು ಹಾಕದ 'ಆ ದಿನಗಳು' ಖ್ಯಾತಿಯ ಚೇತನ್ ಕುಮಾರ್ 'ಕಾಮುಕ'ರ ವಿರುದ್ಧ ಕೆಂಡ ಕಾರಿದ್ದಾರೆ. ಫೇಸ್ ಬುಕ್ ಪುಟದಲ್ಲಿ ಬರೆದಿರುವ ಲೇಖನದಲ್ಲಿ, ಚಿತ್ರರಂಗದಲ್ಲಿನ

 • ಪವರ್ : ಮೊದಲ ದಿನ 16 ಕೋಟಿ ಗಳಿಕೆ ಹೇಗೆ ಸಾಧ್ಯ? Sat, 30 Aug 2014 13:20:15 +0530
  ಪುನೀತ್ ರಾಜಕುಮಾರ್ ಅಭಿನಯದ 'ಪವರ್ ***' ಚಿತ್ರದ ಗೆಲುವಿನ ಅಭಿಯಾನ ಎರಡನೇ ದಿನವೂ ನಿರಾಂತಕವಾಗಿ ಸಾಗಿದೆ. ಗಣೇಶ ಹಬ್ಬದ ಸಾಲು ಸಾಲು ರಜೆಯ ಲಾಭವನ್ನು ಚಿತ್ರತಂಡ ಭರಪೂರವಾಗಿ ಪಡೆದುಕೊಳ್ಳುತ್ತಿದೆ.ಚಿತ್ರಕ್ಕೆ ಎಲ್ಲಡೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದ್ದು, ರಾಜ್ಯಾದ್ಯಂತ ಮತ್ತು ಮಲ್ಟಿಪ್ಲೆಕ್ಸ್ ಗಳಲ್ಲಿ ಚಿತ್ರ ತುಂಬಿದ ಪ್ರದರ್ಶನ ಕಾಣುತ್ತಿದೆ. ಬಳ್ಳಾರಿ, ಹೊಸಪೇಟೆಯಲ್ಲಿ ಬಿಡುಗಡೆಯಾದ ದಿನ ಮೊದಲ ಶೋ ರಾತ್ರಿ ಎರಡುವರೆಗೆ

 • ಚೌತಿ ಹಬ್ಬಕ್ಕೆ ರಜನಿ 'ಲಿಂಗಾ' ಚೂಟಿ ಫಸ್ಟ್ ಲುಕ್ Fri, 29 Aug 2014 16:41:31 +0530
  ಸೂಪರ್ ಸ್ಟಾರ್ ರಜನಿಕಾಂತ್ ಅವರ 'ಲಿಂಗಾ' ಚಿತ್ರೀಕರಣ ರಾಜ್ಯದಲ್ಲಿ ಭರದಿಂದ ಸಾಗುತ್ತಿದೆ. ಅಭಿಮಾನಿಗಳಿಗೆ ನೀಡಿದ ಭರವಸೆಯಂತೆ ಗಣೇಶ ಚೌತಿ ಕೊಡುಗೆಯಾಗಿ ಲಿಂಗಾ ಚಿತ್ರದ ಫಸ್ಟ್ ಲುಕ್ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ರಾಕ್ ಲೈನ್ ಪ್ರೊಡೆಕ್ಷನ್ ನ ಅಧಿಕೃತ ಫೇಸ್ ಬುಕ್ ಪುಟದಲ್ಲಿ ಮಾತ್ರ ಕಾಣಿಸಿಕೊಂಡ ಈ ಪೋಸ್ಟರ್ ಭರ್ಜರಿ ಹಿಟ್ ಆಗಿದೆ. ಕರ್ನಾಟಕದ ಶಿವಮೊಗ್ಗ,

 • ಗುರುಪ್ರಸಾಸ್ ಮೇಲೆ ಕೈಮಾಡಿದ ಅಕುಲ್ ಬಾಲಾಜಿ! Thu, 28 Aug 2014 18:31:40 +0530
  'ಬಿಗ್ ಬಾಸ್'ನಲ್ಲಿ ಆರಂಭವಾದ ಡಬ್ಬ ಟಾಸ್ಕ್ ಗೆ ಇಂದು ತೆರೆಬಿತ್ತು. ಸತತ ಇಪ್ಪತ್ತ ಮೂರು ಗಂಟೆಗಳ ಕಾಲ ಡಬ್ಬದಲ್ಲಿ ಉಳಿಯುವ ಮೂಲಕ ಹೊಸ ದಾಖಲೆಗೆ ಪಾತ್ರರಾದರು ಅನುಪಮಾ ಭಟ್. ಕೊನೆಯದಾಗಿ ಮೆಣಸಿನಕಾಯಿ ಹೊಗೆ ಹಾಕುವ ಮೂಲಕ ಅವರು ಡಬ್ಬದಿಂದ ಹೊರಬಂದರು. ಈ ಬಗ್ಗೆ ಅನುಪಮಾ ಅವರು ಬಿಗ್ ಬಾಸ್ ಮೆಚ್ಚುಗೆಗೂ ಪಾತ್ರರಾದರು. ಸಂತೋಷ್, ದೀಪಿಕಾ ಅವರು

 • ಚಿತ್ರ ವಿಮರ್ಶೆ: ಪುನೀತ್ 'ಪವರ್'ಫುಲ್ ಪರಮಾತ್ಮ Thu, 28 Aug 2014 15:51:27 +0530
  "ಇನ್ನೊಂದು ಸಲ ಚಾನ್ಸ್ ಕೊಡೋಕೆ ನಾನೇನು ಸಿನಿಮಾ ಪ್ರೊಡ್ಯೂಸರೂ ಅಲ್ಲ ಡೈರೆಕ್ಟರೂ ಅಲ್ಲ ಪೊಲೀಸ್" ಎನ್ನುತ್ತಾರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್. ಇದೇ ಮೊಟ್ಟ ಮೊದಲ ಬಾರಿಗೆ ಖಾಕಿ ತೊಟ್ಟ ಅವರು ಪ್ರೇಕ್ಷಕರಿಂದ ಭರ್ಜರಿ ಶಿಳ್ಳೆ ಗಿಟ್ಟಿಸಿದ್ದಾರೆ. ಇದು ತೆಲುಗಿನ 'ದೂಕುಡು' ಚಿತ್ರದ ರೀಮೇಕ್ ಆದರೂ ಕನ್ನಡಕ್ಕೆ ಅಚ್ಚುಕಟ್ಟಾಗಿ ತಂದಿದ್ದಾರೆ ನಿರ್ದೇಶಕ ಕೆ ಮಾದೇಶ್.

 • ಫೇಸ್ಬುಕ್ಕಿನಿಂದ ಹೊರಗಾದ ಪೂನಂ ಪಾಂಡೆ Thu, 28 Aug 2014 13:38:24 +0530
  ಐಸ್ ಬಕೆಟ್ ಚಾಲೆಂಜ್ 'ಹಾಟ್' ಆಗಿ ತೆಗೆದುಕೊಂಡ ಪ್ರಚಾರ ಪ್ರಿಯೆ ಪೂನಂ ಪಾಂಡೆ ಸಾಮಾಜಿಕ ಜಾಲ ತಾಣ ಫೇಸ್ ಬುಕ್ಕಿನಿಂದ ಹೊರಗಾಗಿದ್ದಾರೆ. ಪೂನಂ ಅವರೇ ಫೇಸ್ ಬುಕ್ ನಿಂದ ಹೊರಬಿದ್ರಾ? ಅಥವಾ ಫೇಸ್ ಬುಕ್ ಅವರನ್ನು ಹೊರದಬ್ಬಿತೇ? ಗೊತ್ತಿಲ್ಲ. ಒಟ್ಟಾರೆ, ಟ್ವಿಟ್ಟರ್ ನಲ್ಲಿ ಸದಾ ಕಾಲ ಸಕ್ರಿಯವಾಗಿರುವ ಪೂನಂ ಅವರಿಗೂ ಫೇಸ್ ಬುಕ್ಕಿಗೂ ನಂಟು ಕಳಚಿಕೊಂಡಿದೆ.

 • ಪೂನಂ ಪಾಂಡೆ 'ಹಾಟ್' ಬಕೆಟ್ ಚಾಲೆಂಜ್! Wed, 27 Aug 2014 18:48:50 +0530
  ಊರೆಲ್ಲ ಎಎಲ್ ಎಸ್ ಐಸ್ ಬಕೆಟ್ ಚಾಲೆಂಜ್ ಗುಂಗಿನಲ್ಲಿ ಮುಳುಗಿದ್ದರೆ ಹಾಟ್ ಪೂನಂ ಪಾಂಡೆ ಇದನ್ನು ಮೋಜಿನಾಟ ಮಾಡಿಕೊಂಡಿದ್ದಾಳೆ. ಪ್ರಚಾರ ಪ್ರಿಯೆ ಪೂನಂ ಕೂಡಾ ತನ್ನದೇ ರೀತಿಯಲ್ಲಿ ಐಸ್ ಬಕೆಟ್ ಚಾಲೆಂಜ್ ತೆಗೆದುಕೊಂಡು ಖಾನ್ ತ್ರಯರನ್ನು ನಾಮಿನೇಟ್ ಮಾಡಿದ್ದಾಳೆ. ಪೂನಂ ಪಾಂಡೆ ಬಾತ್ ಟಬ್ ನಲ್ಲಿ ಮಲಗಿಕೊಂಡು ಒಂದಷ್ಟು ಮಾತುಕತೆ ನಡೆಸಿದ ನಂತರ ಐಸ್ ಬಕೆಟ್

 • 'ಕಾಮುಕ' ನಿರ್ದೇಶಕರ ಮುಖವಾಡ ಕಳಚಿದ ಟಿವಿ9 Wed, 27 Aug 2014 18:34:52 +0530
  ಬಣ್ಣದ ಜಗತ್ತಿನಲ್ಲಿ ಇದೆಲ್ಲಾ ಕಾಮನ್ ಅಂತೀರಾ? ನಿರ್ದೇಶಕರ 'ಬಯಕೆ' ತೀರಿಸಿದರೇನೇ ಇಲ್ಲಿ ಚಾನ್ಸ್ ಸಿಗತ್ತಾ? ಈ ರೀತಿಯ ಮಾತುಗಳು ಆಗಾಗ ಕಿವಿಗೆ ಬೀಳುತ್ತಲೇ ಇರುತ್ತವೆ. ಆದರೆ ಮಂಗಳವಾರ (ಆ.26) ಸಂಜೆ ಟಿವಿ9 ಕನ್ನಡ ಪ್ರಸಾರ ಮಾಡಿದ ಕಾರ್ಯಕ್ರಮ ಇಡೀ ಸ್ಯಾಂಡಲ್ ವುಡ್ ಬೆಚ್ಚಿ ಬೀಳುವಂತೆ ಮಾಡಿದೆ. ಟಿವಿ9 ರಹಸ್ಯ ಕಾರ್ಯಾಚರಣೆಯಲ್ಲಿ ಸ್ಯಾಂಡಲ್ ವುಡ್ ನ ಕೆಲವು

 • ಬಿಗ್ ಬಾಸ್ ನಲ್ಲಿ ನೀತೂ, ದೀಪಿಕಾ ಶರಂಪರ ಕಿತ್ತಾಟ Wed, 27 Aug 2014 17:29:51 +0530
  ಬಿಗ್ ಬಾಸ್ ರಿಯಾಲಿಟಿ ಶೋ ಯಶಸ್ವಿಯಾಗಿ ಅರ್ಧ ದಾರಿ ಸವೆಸಿದೆ. ಇನ್ನುಳಿದ ದಾರಿಯನ್ನು ಕ್ರಮಿಸಬೇಕಾದರೆ ಟಾಸ್ಕ್ ಗಳೂ ಕಠಿಣವಾಗುತ್ತಾ ಹೋಗುತ್ತಿವೆ. ಈ ವಾರ ಬಿಗ್ ಬಾಸ್ ಕೊಟ್ಟದ್ದು 'ಡಬ್ಬ ಟಾಸ್ಕ್'. ಇದು ಲಗ್ಜುರಿ ಬಜೆಟ್ ಟಾಸ್ಕ್ ಆಗಿದ್ದು ಗೆಲ್ಲಲು ಸ್ಪರ್ಧಿಗಳು ತಮ್ಮ ಶಕ್ತಿಮೀರಿ ಪ್ರಯತ್ನಿಸಿದರು. ಐವತ್ತೆಂಟನೇ ದಿನ ಮನೆಯಲ್ಲಿ ಕೆಲವೊಂದು ನಾಟಕೀಯ ಬೆಳವಣಿಗೆಗಳು, ಮಾತಿನ ಚಕಮಕಿ,

Today Visits : 603 | Yesterday Visits : 47458